Saturday, November 15, 2008

ಚಳಿ...

ಳಿ ನಿನ್ನ ನೆನಪಿಸುತ್ತದೆ.
ಆದ್ರೆ, ಇಲ್ಲಿ ನೀ ಕೇವಲ
ಒಂದು ಕೊರೆವ ಅನುಭವ...

ಚಳಿ ನಿನ್ನ ನೆನಪಿಸುತ್ತದೆ...
ಹಾಗೇನೆ ಕಳೆದು ಹೋದ ಆ
ಮುಂಚಾವು ಇಲ್ಲಿ ಮತ್ತೆ
ತಾಜಾ ಗೊಳ್ಳುತ್ತಿದೆ....

ಚಳಿ ನಿನ್ನ ನೆನಪಿಸುತ್ತಿದೆ...
ಹಾಗೇನೆ ಗಾಯಗೊಂಡ
ಹೃದಯ ಇಲ್ಲಿ ಮತ್ತೆ
ಮಿಡಿಯುತ್ತಿದೆ...

ಚಳಿ ನಿನ್ನ ನೆನಪಿಸುತ್ತಿದೆ...
ಆದ್ರೂ ನಿನ್ನ ಬೆಚ್ಚನೆಯ
ಪ್ರೀತಿ ಈಗಲೂ ಕೇವಲ
ಒಂದು ಕವಿತೆ...

- ರೇವನ್...

1 comment:

ಪ್ರಿಯಾ ಕೆರ್ವಾಶೆ said...

ಕವನ ಓದುತ್ತಿದ್ದರೆ ಗಜಲ್‌ ಕೇಳಿದಂತಾಗುತ್ತದೆ. ಚೆನ್ನಾಗಿದೆ ಕವನ..