Friday, October 31, 2008

ನೀ ನನ್ನ ಮರೆತ ಕ್ಷಣ...

ನೀ ನನ್ನ ಮರೆತ ಕ್ಷಣಗಳು
ಇಲ್ಲಿ ಸಾಲುಗಳಾಗುತ್ತವೆ.
ಆದ್ರೂ ನಿನ್ನ ನೆನಪು ಕಾಡುತ್ತದೆ...

ನೀ ನನ್ನ ಮರೆತ ಕ್ಷಣ ಇಲ್ಲಿ
ನನ್ನ ಒಲವಾಗುತ್ತದೆ. ಆದ್ರೂ
ನೀ ಮನಸು ಬದಲಿಸುವುದೇ ಇಲ್ಲ...

ನೀ ನನ್ನ ಮರೆತ ಕ್ಷಣ ಇಲ್ಲಿ
ನನ್ನ ಸ್ಪೂರ್ತಿ ಆಗುವ ಪ್ರಯತ್ನ ಮಾಡುತ್ತದೆ.
ಆದ್ರೂ ನೀ ನನ್ನ ಎದೆಯಲ್ಲಿ ಗಾಯ ಮಾಡುತ್ತೀ...

ನೀ ನನ್ನ ಮರೆತ ಕ್ಷಣ ಇಲ್ಲಿ
ನೋವಾಗುತ್ತದೆ....ಸಾಲಾಗುತ್ತದೆ...ಜೊತೆಗೆ
ಸಾವೂ ಒಮ್ಮೆ ಮುತ್ತಿಕ್ಕಿ ಹೋಗುತ್ತದೆ....
ಆದ್ರೂ ನೀ ಸುಮ್ಮನಿರತಿ...

- ರೇವನ್