Tuesday, November 4, 2008

ಆ ದಿನ...

ಮ್ಮ ಮಾತುಗಳು ಮುಗಿದಿದ್ದವು.
ಮನಸ್ಸು ಸಂತಸಗೊಂಡಿತು. ಆದ್ರೂ
ಹೃದಯಕ್ಕೆ ನಿನ್ನಿಂದ ಅದೇನೋ ಬೇಕಿತ್ತು
ಆ ದಿನ...

ಮನಸು ಸಂಪೂರ್ಣ ಖುಷಿಯಲ್ಲಿತ್ತು.
ಅದೇಕೋ ಏನೋ ಆ ದಿನ ಮನಸ್ಸಿನಲ್ಲಿ
ಕೇಳಿದ, ಹೇಳಿದ ಪದ್ಯಗಳು ಮೂಡುತ್ತಿದ್ದವು.
ಆದ್ರೂ ಮನಸ್ಸಿಗೆ ಬೇಕಿತ್ತು ಅದೇನೊ..

ಮಾತಿನಲ್ಲಿಯೇ ಕಳೆದು ಹೋಗಿತ್ತು
ಅದೇಷ್ಟೋ ಕ್ಷಣ. ಮೂಡಿ ಹೋಗಿದ್ದವು ಆಗ
ಅದೇಷ್ಟೋ ಭಾವನೆ. ಆದರೂ ಏನೋ
ಬೇಕಿತ್ತು ಆ ದಿನ..

-ರೇವನ್...

No comments: