Wednesday, December 2, 2009

ನನ್ನ ವಿಶ್ವಾಸ....

ನನಗೆ ಸಿಕ್ಕಾಪಟ್ಟೆ ಕಾನ್ಫಿಡನ್ಸ್...
ಬೇಜಾನ್ ತಾಕತ್ತು...ಮುಗಿಯದ
ಕನಸಿನ ಲೋಕ..

ಆದ್ರೆ, ಎನು ಮಾಡೋದು.
ಕಾನ್ಫಿಡನ್ಸ್ ಮತ್ತು ತಾಕತ್ತಿನ
ನಡುವಿನ ಪದರು ತುಂಬಾ ಥಿನ್.

ಹಾಗಂತ ನಾನು ಹಿಂಜರೆಯೋದಿಲ್ಲ.
ಮುನ್ನುಗ್ತುತ್ತೇನೆ. ಹೆದರುತ್ತೇನೆ.
ಕುಗ್ಗುತ್ತೇನೆ. ಆದ್ರೂ, ಕೆಲವೇ ಕ್ಷಣದಲ್ಲಿ
ಮತ್ತೆ ಗಟ್ಟಿಯಾಗುತ್ತದೆ ನಂಬಿಕೆ...

ರೇವನ್...

Monday, November 30, 2009

ಕವಿತೆ

ಕವಿತೆ ಬರೆಯಲೊಲ್ಲದ ಮನಸ್ಸು ಕಾಡುತ್ತಿದೆ.
ಬೇಕು ಎನ್ನುತ್ತಿದೆ ಎಂದೂ ತುಡಿಯದ ಉತ್ಸಾಹ.
ಆದ್ರೆ, ಭಾವಗಳೆ ಸಾಥ್ ನೀಡುತ್ತಿಲ್ಲ..

ರೇವನ್...

Monday, November 23, 2009

ನೆಮ್ಮದಿ

ನಿನ್ನ ಸ್ಪಶ ನೆಮ್ಮದಿಯ ನಿಟ್ಟುಸಿರು.
ಗರಿಗೆದರಿ ನಿಂತ ಹುಚ್ಚು ಮನಸ್ಸಿಗೆ
ಪ್ರೀತಿಯ ಒಂದು ಕಡಿವಾಣ...

ರೇವನ್...

Friday, February 20, 2009

ನೋವಿನ ಮೋಹ...

ನನಗೆ "ಹಾಡು" ಕಾಡುತ್ತವೆ...
ಆಗ "ನೋವು" ಮೋಹ ವಾಗುತ್ತದೆ...

ನನಗೆ ಹಾಡು ಕಾಡುತ್ತವೆ...
ನೋವು ನನ್ನ ಸ್ನೇಹಿತವಾಗ್ತದೆ...

ನನಗೆ ಹಾಡು ಕಾಡುತ್ತವೆ...
ಆ ಮರುಕ್ಷಣವೇ ಅವಳ ನೆನಪಾಗುತ್ತದೆ....

ನನಗೆ ಹಾಡು ಕಾಡುತ್ತವೆ...
ಅವಳು ಬಿಟ್ಟು ಹೋದ ನೋವು ಮತ್ತೆ
ಕಾಡುತ್ತದೆ...

ನನಗೆ ಹಾಡು ಕಾಡುತ್ತವೆ...
ಆಗ "ನೋವು" ಮತ್ತೆ ಮೋಹವಾಗುತ್ತದೆ...
ಮತ್ತೆ ನೋವಾಗುತ್ತದೆ..ಮತ್ತೆ ಮೋಹವಾಗುತ್ತದೆ....
ಕಳಚಿಕೊಳ್ಳದ "ಪ್ರೀತಿ"ಯ ಹಾಗೆ...

- ರೇವನ್...