Tuesday, August 26, 2008

ಬಂಗಾರದ ಬೆಳಕಿಗೆ...

ಬಂಗಾರದ ಬೆಳಕಿಗೆ ಮಿಂಚಿತ್ತು ನಿನ್ನ ಬಣ್ಣ
ಮಳೆ ಹನಿಗಳ ಸದ್ದಿನಲ್ಲಿ ಮುಳುಗಿದ್ದವು ನಿನ್ನ ಕಣ್ಣ
ಬಂಗಾರದ ಬೆಳಕಿಗೆ....ಮಿಂಚಿತ್ತು ನಿನ್ನ ಬಣ್ಣ...

ಕಣ್ಣೋಟದಲ್ಲಿ ಅದೇನೋ ಆಸೆ...
ಮನದಲ್ಲಿ ಅದೇನೋ ಸೆಳೆತ...
ಬಂಗಾರದ ಬೆಳಕಿಗೆ ಮಿಂಚಿತ್ತು ನಿನ್ನ ಬಣ್ಣ...

ಮಳೆ ಹನಿಯಲ್ಲಿ ಕಳೆದು ಹೋದ ನೀನು...
ಆಗ ಮರೆತಿದ್ದೆ ನಿನ್ನನ್ನೆ ನೀನು...
ಬಂಗಾರದ ಬೆಳಕಿಗೆ ಮಿಂಚಿತ್ತು ನಿನ್ನ ಬಣ್ಣ...

-ರೇವನ್...

Tuesday, August 19, 2008

ಚಲುವೆ...

ನಿನ್ನದು ಅರ್ಥವಾಗದ ಸೌಂದರ್ಯ...
ಇಲ್ಲಿ ಆ ಚಲುವಿಲ್ಲ..ಆದರೂ ಅದೇನೋಸೆಳೆತವಿದೆ...
ಜಟಿಲ ಕವಿತೆಯ ಹಾಗೆ...

ನಿನ್ನದು ಅರ್ಥವಾಗದ ಸೌಂದರ್ಯ...
ಇಲ್ಲಿ ಕಣ್ಬೆಳಕಿನ ಚೆಂದನೆಯ ಕಾಂತಿಯಿಲ್ಲ...
ಆದರೂ ಒಂದು ಕವಿತೆ ಹುಟ್ಟುತ್ತದೆ...ನಿನ್ನ ಸ್ಪರ್ಶದ ಹಾಗೆ....

ನಿನ್ನದು ಅರ್ಥವಾಗದ ಸೌಂದರ್ಯ....
ಇಲ್ಲಿ ಚೆಂದನೆಯ ಮೈಮಾಟವಿಲ್ಲ...
ಆದರೂ ಹಲವು ಏರಿಳಿತಗಳಿವೆ... ಚೆಂದನೆಯ ಮೋಡದ ಹಾಗೆ..

ಅದಕ್ಕೆ ಅನ್ನೋದು ಚೆಲುವು...ಒಲವು ಒಬ್ಬರ ಸ್ವತ್ತಲ್ಲ ಅಂತಾ...
-ರೇವನ್...

Sunday, August 17, 2008

ಪ್ರೀತಿ...

ಕಳೆದು ಹೋದ ಕ್ಷಣಗಳಿಗೆ...
ತುಂಬಿ ಬರುವ ಭಾವಗಳಿಗೆ...
ಮರೆತು ಹೋಗುವ ನಿನ್ನ ನೆನಪಿಗೆ..
ಒಂದೇ ಒಂದು ಅರ್ಥ..ಅದು ಪ್ರೀತಿ...
-ರೇವನ್...

Monday, August 4, 2008

ನಗೆ...

ನಂಗು ನಗೆ...
ನಿಂಗು ನಗೆ...
ಮಿಂಚಿ ಹೋಗುವ
ನಗೆಗೆ ನಮ್ಮಲ್ಲರ ಈ ನಗೆ...
-ರೇವನ್...