Thursday, May 1, 2008

ನಿನ್ನ ಸಾಲು...

ನಿನ್ನ ಪ್ರತಿ ಮಾತಿನಲ್ಲೂ ಮುಗ್ಧತೆಯ ಸಿಂಚನ.
ಮನದ ಆಸೆಗೆ ಕಲ್ಪನೆ ನಿಲುಕಿದರೂ ಈಗಲೂ ನಾಚಿಕೆಯ ಲೇಪನ.
ಹೃದಯದಲ್ಲಿ ನನ್ನ ಬಿಂಬವಿದ್ದರೂ ಪ್ರತ್ಯಕ್ಷ ಕಾಣಬೇಕೆಂಬುದು ನಿನ್ನ ಹಂಬಲ.

ನಲಿದು
, ಒಲಿದು...ನಿನ್ನಡೆಗೆ ಬಂದರೂ ನಿನ್ನ ಹೃದಯ ಇನ್ನೂ ಬೇಕು
ಅನ್ನುತ್ತಿದೆ ಪ್ರೀತಿಯನ್ನ. ಉಸಿರು ಬಿಗಿಹಿಡಿದು ಎಲ್ಲ ಪ್ರೀತಿಯನ್ನ ನಿನಗೆ
ಬಸಿದಾಗಿದೆ... ಹೇ !!! ನನ್ನ ಒಲವೇ... ಕೊಂಚ ತಡೆ... ಮುನಿಸಿಕೊಳ್ಳಬೇಡ.

ನನ್ನ
ಉಸಿರ ಮಧ್ಯ ಆಗ ಒಂದು ಹನಿ ಪ್ರೀತಿ ಉಳಿದಿತ್ತು.
ಆ ಪ್ರೀತಿ ಈಗ ಅನಾವರಣಗೊಳ್ಳುತ್ತಿದೆ.

- ರೇವನ್...