Wednesday, June 25, 2008

ಕಲ್ಪನೆಯ ಒಂದು ಕ್ಷಣ...

ನೀ ಬರುವ ಮೊದಲೇ ಇದು ಮರೆಯಾಗಿತ್ತು...
ನಿನ್ನ ಚೆಲುವಿನ ಹಾಗೆ...

ಹೃದಯದಲ್ಲಿ ಇದು ಅರಳುವ ಮೊದಲೇ
ಒಂದೇ ಒಂದು ಕ್ಷಣವಾಗಿತ್ತು...ನಿನ್ನ ಪ್ರೀತಿಯ ಹಾಗೆ...

ಕಲ್ಪನೆಯ ಈ ಒಂದು ಕ್ಷಣ ಆಗ ಕೇವಲ ಮಿಡಿತವಾಗಿತ್ತು...
ನಿನ್ನ ಮೋಹ ನನ್ನೆದೆಯಲಿ ಕಾಲಿಡುವ ಮೊದಲೇ..

-ರೇವನ್...

Monday, June 23, 2008

ನಿಲ್ಲದು ವಾಯಲಿನ್...

ವಾಯಲಿನ್ ನುಡಿಸುತ್ತಿದೆ ನಿನ್ನ ನೋವ ನನ್ನ ಹೃದಯದಲ್ಲಿ...
ಆದರೂ ಕಣ್ಣ ಹನಿ ನಿಲ್ಲದು...

ವಾಯಲಿನ್ ಅಳುತ್ತಿದೆ ನಿನ್ನ ನೆನೆ,ನೆನೆದು...ದು:ಖದಲ್ಲಿ.
ಆದರೂ ಬತ್ತದು ನಿನ್ನ ನೋವು.

ವಾಯಲಿನ್ ರೋಧಿಸುತ್ತಿದೆ ನಿನ್ನ ಪ್ರೀತಿಯಲ್ಲಿ.
ಆದರೂ ಮರೆಯಲಾಗದು ನಿನ್ನ ಮೋಸ...

ವಾಯಲಿನ್ ಕೊರೆಯುತ್ತಿದೆ ನನ್ನ ಹೃದಯ.
ಆದರೂ ಬಿಡದು ನಿನ್ನ ಒಲವು..

ವಾಯಲಿನ್ ಸೋಲುತ್ತಿದೆ ನಿನ್ನ ಮಿಡಿಯಲು.
ಆದರೂ ಮಾಯವಾಗದು ನಿನ್ನ ಚೆಲುವು.

ನೀ ಮರೆಯಾದರೂ, ನೀ ಮಾಯವಾದರೂ ನಿಲ್ಲದು
ಈ ವಾಯಲಿನ್....

-ರೇವನ್...

Saturday, June 21, 2008

ಕಳೆದು ಹೋದ ಕ್ಷಣ...

ನಿನ್ನ ನೆನಪು... ಕಳೆದು ಹೋದ ಕ್ಷಣ.
ಎಲ್ಲವೂ ಈಗ ಬರೀ ನೆನಪು..


ಸುಟ್ಟರೂ ಸುಡಲಾರದು ನಿನ್ನ ಆ ಮಧುರ ಪ್ರೀತಿ.
ಅರಳಿದರೂ ಬಾಡದು ಈ ನೋವು.


ಕಳೆದು ಹೋದ ಆ ಕ್ಷಣ. ಮತ್ತು ನಿನ್ನ ನೆನಪು
ಈಗ ಬರಿ ನೋವು..ಯಾತನೆ.. ಮತ್ತೂ ಯಾತನೆ.


ಬದುಕು ಅರ್ಥವಾಗುವ ಮೊದಲೇ ನೀ ಬಂದಿದ್ದೆಲ್ಲ.
ಈಗ ಜೀವ ಅರಳಿ ನಿಂತಿದೆ. ನಿನ್ನ ನೆನಪುಗಳಿವೆ. ಜೊತೆಗೆ
ನೀನ್ನ ಆ ಮಧುರ ನೋವುಗಳಿವೆ. ಜೀವಿಸಲಾ ಅನ್ನೋ ಪ್ರಶ್ನೆ
ನಿನ್ನಂತೆ ಈಗ ಸದ ಕಾಡುತ್ತಿದೆ.

- ರೇವನ್...

ಮೌನ ...

ನುಡಿಯದ ಮೌನ ಸಾಲಾಯಿತು...
ಮಿಡಿದ ಹೃದಯ ಸ್ತಬ್ಧವಾಯಿತು...
ಆದ್ರೆ, ನಿನ್ನ ನೋವು ಎಂದೂ ನನ್ನದಾಗಲಿಲ್ಲ.
- ರೇವನ್...