ಚೂರು- ಪಾರು ಸೇರಿ
ಭಾವವಾದವು...
ಅವಳ-ಇವಳ ನೋಡಿ
ಲವ್ವೇ ಆದವು...
ನಾನು-ಅವಳು ಗೂಡಿ
ಜೀವನ ಮಾಡಿದೇವು..
ಚೂರು-ಪಾರು ಸೇರಿ
ನೋವೇ ಮಾಯವಾದವು...
-ರೇವನ್
ಒಲವೇ..
ಕವಿ ಮಾಡಿದ ಹುಡುಗಿ..
Sunday, November 27, 2011
Tuesday, August 30, 2011
ನನ್ನಾಕೆ...
ಈಗೀಗ ನನ್ನಾಕೆ ಅಕ್ಷರ
ರೂಪದಲ್ಲಿ ಎದೆಯಿಂದಾಚೆ
ಹೊರ ಬರುತ್ತಿದ್ದಾಳೆ.
ಎದೆಯಲ್ಲಿ ತುಂಬಾ ಪ್ರೀತಿ ನೋಡಿ
ಅದಕ್ಕೋ ಏನೋ....ನನ್ನಾಕೆ
ಪ್ರತಿ ಭಾವದಲ್ಲೂ ಇಣುಕಿ ನೋಡುತ್ತಾಳೆ
ಆಗಾಗ ರಿಯಾಲಿಟಿ ಚೆಕ್ಕೂ ಆಗುತ್ತದೆ..
ನಾನು ಜಾಗೃತನಾಗಿದ್ದೇನೆ...ಯಾಕೆಂದ್ರೆ,
ಅವಳು ನನ್ನವಳಲ್ಲವೇ....ಪ್ರೀತಿ
ನನ್ನದಲ್ಲವೇ...
-ರೇವನ್
ರೂಪದಲ್ಲಿ ಎದೆಯಿಂದಾಚೆ
ಹೊರ ಬರುತ್ತಿದ್ದಾಳೆ.
ಎದೆಯಲ್ಲಿ ತುಂಬಾ ಪ್ರೀತಿ ನೋಡಿ
ಅದಕ್ಕೋ ಏನೋ....ನನ್ನಾಕೆ
ಪ್ರತಿ ಭಾವದಲ್ಲೂ ಇಣುಕಿ ನೋಡುತ್ತಾಳೆ
ಆಗಾಗ ರಿಯಾಲಿಟಿ ಚೆಕ್ಕೂ ಆಗುತ್ತದೆ..
ನಾನು ಜಾಗೃತನಾಗಿದ್ದೇನೆ...ಯಾಕೆಂದ್ರೆ,
ಅವಳು ನನ್ನವಳಲ್ಲವೇ....ಪ್ರೀತಿ
ನನ್ನದಲ್ಲವೇ...
-ರೇವನ್
ಪ್ರೀತಿಯಲಿ ದೂರ...
ನಾನು ಪ್ರೀತಿಯಲ್ಲಿ ಬಹಳ
ದೂರ ನಡೆದ ಹೋಗಿದ್ದೇನೆ...
ಈಗ ವಾಪಸ್ಸ ಬರಲು ದಾರಿ
ಮರೆತು ಹೋಗಿದೆ.ಕಣ್ಣು
ಮಂಜಾಗಿವೆ. ಇಳಿ ವಯಸ್ಸು
ನೋಡಿ...
ಯವ್ವನದಲ್ಲಿಯೇ ಅವಳನ್ನ
ಹುಡುಕಿ ಕೊಂಡು ಸಾಗಿದ್ದೆ...
ಈಗಲೂ ಅವಳು ನನಗೆ
ಸಿಕ್ಕಿಲ್ಲ..ಮೋಸ್ಟ್ಲಿ ಅವಳು
ನನ್ನ ಕಲ್ಪನೆ ಇರಬೇಕು...
-ರೇವನ್
ದೂರ ನಡೆದ ಹೋಗಿದ್ದೇನೆ...
ಈಗ ವಾಪಸ್ಸ ಬರಲು ದಾರಿ
ಮರೆತು ಹೋಗಿದೆ.ಕಣ್ಣು
ಮಂಜಾಗಿವೆ. ಇಳಿ ವಯಸ್ಸು
ನೋಡಿ...
ಯವ್ವನದಲ್ಲಿಯೇ ಅವಳನ್ನ
ಹುಡುಕಿ ಕೊಂಡು ಸಾಗಿದ್ದೆ...
ಈಗಲೂ ಅವಳು ನನಗೆ
ಸಿಕ್ಕಿಲ್ಲ..ಮೋಸ್ಟ್ಲಿ ಅವಳು
ನನ್ನ ಕಲ್ಪನೆ ಇರಬೇಕು...
-ರೇವನ್
ನಾನು ಗೌರವಿಸುವೇ...
ಹೆಣ್ಮಕ್ಕಳ ಬಗ್ಗ ನನಗೆ
ಗೌರವವಿದೆ...ಯಾಕೆಂದ್ರೆ
ಅವ್ರು ಹೆಣ್ಮಕ್ಕಳು...
ಅವ್ರು ಬದುಕಿನ ಆ ಪುಟ್ಟ
ಪರಿದಿಯಿಂದ ಹೊರಗೇ
ಬರೋದಿಲ್ಲ..
ಜೀವನದ ಸೀಮಿತ ಗಡಿ
ರೇಖೆಯಲ್ಲಿಯೆ ಕನಸು
ಹೊಸೆಯುತ್ತಾರೆ...
ಅವರ ಕಂಗಳೋ...ಆಕಾಶ
ದಾಚೆಗೆ ಹರಿದು ಹೋಗುತ್ತವೆ
ಆದ್ರೂ ಅವ್ರು ನೆವರ್ ಕಮ್
ಟು ನೋ ವಾಟ್ ದೇ ಆರ್ರ
- ರೇವನ್
ಗೌರವವಿದೆ...ಯಾಕೆಂದ್ರೆ
ಅವ್ರು ಹೆಣ್ಮಕ್ಕಳು...
ಅವ್ರು ಬದುಕಿನ ಆ ಪುಟ್ಟ
ಪರಿದಿಯಿಂದ ಹೊರಗೇ
ಬರೋದಿಲ್ಲ..
ಜೀವನದ ಸೀಮಿತ ಗಡಿ
ರೇಖೆಯಲ್ಲಿಯೆ ಕನಸು
ಹೊಸೆಯುತ್ತಾರೆ...
ಅವರ ಕಂಗಳೋ...ಆಕಾಶ
ದಾಚೆಗೆ ಹರಿದು ಹೋಗುತ್ತವೆ
ಆದ್ರೂ ಅವ್ರು ನೆವರ್ ಕಮ್
ಟು ನೋ ವಾಟ್ ದೇ ಆರ್ರ
- ರೇವನ್
Wednesday, August 17, 2011
ಹಾಡೊಂದು...
ಹಾಡೊಂದು ಹಾಡಿದೆ..
ಭಾವ ತುಂಬಿ ನನ್ನಲಿಯೆ
ಕೇಳೊ ಕಿವಿಗಳೋ..
ನಿಜಕ್ಕೂ ಕಿವುಡಾಗಿವೆ...
ಹಾಡೊಂದು ಹಾಡಿದೆ..
ಅವಳ ನೆನಪಲ್ಲಿ..ಅವಳೋ..
ಕೇಳಿಸಿಕೊಳ್ಳಲೂ ಇನ್ನೂ ರೆಡಿಯಿಲ್ಲ...
ಹಾಡೊಂದು ಹಾಡಿದೆ...ಎದೆ ತುಂಬಿ
ಹೃದಯವೋ ಈಗೀಗ ತುಂಬಾನೇ
ಕೈಕೊಡುತ್ತದೆ...
ಹಾಡೊಂದು ಹಾಡುತ್ತಿದ್ದೇನೆ...
ಅವಳು ಬಿಟ್ಟು ಹೋದ ಅದೇ
ಭಾವದಲ್ಲಿ...ಅದೇ ರಾಗದಲ್ಲಿ...
-ರೇವನ್
ಭಾವ ತುಂಬಿ ನನ್ನಲಿಯೆ
ಕೇಳೊ ಕಿವಿಗಳೋ..
ನಿಜಕ್ಕೂ ಕಿವುಡಾಗಿವೆ...
ಹಾಡೊಂದು ಹಾಡಿದೆ..
ಅವಳ ನೆನಪಲ್ಲಿ..ಅವಳೋ..
ಕೇಳಿಸಿಕೊಳ್ಳಲೂ ಇನ್ನೂ ರೆಡಿಯಿಲ್ಲ...
ಹಾಡೊಂದು ಹಾಡಿದೆ...ಎದೆ ತುಂಬಿ
ಹೃದಯವೋ ಈಗೀಗ ತುಂಬಾನೇ
ಕೈಕೊಡುತ್ತದೆ...
ಹಾಡೊಂದು ಹಾಡುತ್ತಿದ್ದೇನೆ...
ಅವಳು ಬಿಟ್ಟು ಹೋದ ಅದೇ
ಭಾವದಲ್ಲಿ...ಅದೇ ರಾಗದಲ್ಲಿ...
-ರೇವನ್
Tuesday, August 9, 2011
ದೂರ..ದೂರ ಹಾರೋ ಆಸೆ...
ದೂರ ಹಾರಬೇಕು..ಬಹು ದೂರ
ಹಾರಬೇಕು. ಉಸಿರು ಬಂದ್ರು
ಆಸು-ಪಾಸು..ಆಗಲೂ ಸಿಗಬಾರದು.
ಅಷ್ಟು ದೂರ ಹಾರಬೇಕು...
ಅವಳು ಬಂದು ಎದೆ ತಟ್ಟಿ
ಕೇಳಿದ್ರು ಅಷ್ಟೆ. ಒಳಗಿನ
ನೆನಪುಗಳನ್ನ ಬಿಚ್ಚದಂತೆ
ಅಲ್ಲಿಯೇ ಅವುಗಳನ್ನ ಬಚ್ಚಿಟ್ಟು
ಕೊಳ್ಳಬೇಕು...ಹಾರಬೇಕು..
ದೂರ..ದೂರಕ್ಕೆ..
ದೂರ..ದೂರ ಹಾರಬೇಕು..
ಅವಳ ಕಲ್ಪನೆಗೂ ನೀಲುಕದಂತೆ
ಅಷ್ಟು ದೂರ ಸಾಗಬೇಕು...
ಅವಳನ್ನ ಬಿಟ್ಟು ಅವಳಿಗೂ
ಸಿಗದ ಆ ತೀರಕೆ...ಆ ತೀರಕೆ...
-ರೇವನ್
ಹಾರಬೇಕು. ಉಸಿರು ಬಂದ್ರು
ಆಸು-ಪಾಸು..ಆಗಲೂ ಸಿಗಬಾರದು.
ಅಷ್ಟು ದೂರ ಹಾರಬೇಕು...
ಅವಳು ಬಂದು ಎದೆ ತಟ್ಟಿ
ಕೇಳಿದ್ರು ಅಷ್ಟೆ. ಒಳಗಿನ
ನೆನಪುಗಳನ್ನ ಬಿಚ್ಚದಂತೆ
ಅಲ್ಲಿಯೇ ಅವುಗಳನ್ನ ಬಚ್ಚಿಟ್ಟು
ಕೊಳ್ಳಬೇಕು...ಹಾರಬೇಕು..
ದೂರ..ದೂರಕ್ಕೆ..
ದೂರ..ದೂರ ಹಾರಬೇಕು..
ಅವಳ ಕಲ್ಪನೆಗೂ ನೀಲುಕದಂತೆ
ಅಷ್ಟು ದೂರ ಸಾಗಬೇಕು...
ಅವಳನ್ನ ಬಿಟ್ಟು ಅವಳಿಗೂ
ಸಿಗದ ಆ ತೀರಕೆ...ಆ ತೀರಕೆ...
-ರೇವನ್
Saturday, August 6, 2011
ಕವಿ ಗುಲ್ಜಾರ್...

ವಯಸ್ಸು ಅದೆಷ್ಟೋ ಆದ್ರೂ ಕವಿತೆ ಉಗಮಿಸೋ ಮನಸ್ಸು ಇನ್ನು ಜವಾನ್ ಹೈ...ಇನ್ನ ಸ್ಪಷ್ಟ ದೃಷ್ಟಿಕೋನ ಇಟ್ಟುಕೊಂಡಿದೆ ಹೊಸ ಪ್ರಯೋಗಗಳಿಗೆ ತೆರೆದು ಕೊಳ್ಳುತ್ತದೆ.
ಕವಿ ಗುಲ್ಜಾರ್ ಆಗಿನಿಂದಲೂ ಬರೀತಾ ಇದ್ದಾರೆ. ಈಗಲೂ ಗುಲ್ಜಾರ್ ಉತ್ಸಾಹ ನಿಲ್ಲುವ ನಿಶಾನೆ ತೋರುತ್ತಿಲ್ಲ. ಸಾಗುತ್ತಲ್ಲೇ ಇದೆ ಭಾವಾಲೋಕದಲ್ಲಿ...
ಗುಲ್ಜಾರ್ ಕವಿತೆ ಇತ್ತೀಚಿನ ಇಸ್ಕಕೀಯಾ ಸಿನಿಮಾದಲ್ಲೂ ಇದ್ದವು.`ದಿಲ್ ಥೋ ಬಚ್ಚಾ ಹೈ ಜೀ' ಅಂತಲೇ ಈ ವಯಸ್ಸಿನಲ್ಲೂ ಚಂಚಲ ಮನದ ಮಸ್ತಿ ಬರೆದಿದ್ರು. ದಿಲ್ ಸಾ ಕೋಯಿ ಕಮೀನಾ ನಹೀ ಅಂದವರೂ ಇದೇ ಗುಲ್ಜಾರ್...
ಇದೇನೋ ಸಿನಿಮಾ ಮಾತಾಯಿತು. ತೆರೆ ಹಿಂದೆ ಗುಲ್ಜಾರ್ ಕವಿತಾ ಪ್ರೀಯರು ಸಾಕಷ್ಟು ಜನ. ಅದಕ್ಕೋ ಏನೋ...ಯು ಟ್ಯೂಬ್ ನಲ್ಲಿ ಗುಲ್ಚಾರ್ ಪೊಯೆಟ್ರಿ ಅಂತ ಬರೆದು ಕೀ ಬೋರ್ಡ್ ನ ಎಂಟರ್ ಕೀ ಹೊಡೆದ್ರೆ ಆಯಿತು. ಸಾಲು..ಸಾಲು ಗುಲ್ಚಾರ್ ಕವಿತೆಗಳು ಸಿಗುತ್ತವೆ. ಅವರೇ ಹೇಳಿದ ಆ ಕವಿತೆ ಒಂದಷ್ಟು ತುಣುಕು ಇಲ್ಲಿವೆ...ಅವುಗಳನ್ನ ತರ್ಜುಮೆ ಮಾಡೋ ಪುಟ್ಟ ಪ್ರಯತ್ನ ಮಾಡಿದ್ದೇನೆ..
ನೀ ಧರೆಗಿಳಿಸಿದ ಆ ದಿನ
ತೋಟದಲ್ಲಿ ಈಗಲೂ
ಖಾಯಂ ಆಗಿದೆ...
ರಂಗು ಮಾಸಿಲ್ಲ..
ದಿನವೂ ಕೆಟ್ಟು ಹೋಗಿಲ್ಲ.
ನೀ ಬಿಟ್ಟು ಹೊದಂತೇನೆ ಇದೆ.
ಇಲ್ಲಿ ಬರೋ ಅಳಿಲಿಗೆ
ಇಲ್ಲಿ ಬರೋ ಅಳಿಲಿಗೆ
ಈಗೀಗ ನಾನೂ ನಿನ್ನಂತೆ
ಬಿಸ್ಕತ್ ತಿನಿಸುತ್ತೇನೆ...
ಆದ್ರೂ, ಅಳಿಲು ನನ್ನ
ಅನುಮಾನಿಸುತ್ತವೆ.
ಅವು ನಿನ್ನ ಇನ್ನು
ಮರೆತಿಲ್ಲವೋ ಏನೊ..
ದಿನದ ಸ್ಕಾರ್ಪ್ ತೆಗೆದು
ಹಾಕುತ್ತೇನೆ. ನೀ ಬಿಟ್ಟು
ಆ ದಿನದ ನೆನಪನ್ನು ಧರಿಸಿ
ಕೊಂಡು ಜೀವಿಸುತ್ತೇನೆ....
ಜೀವಿಸುತ್ತಿದ್ದೇನೆ....
ಜೀವಿಸುತ್ತಿದ್ದೇನೆ....
ಇಂತಹ ಕವಿತೆಗಳು ಹಲವು ಇವೆ. ಒಂದಕ್ಕಿಂತ ಒಂದು ವಿನೂತನ. ಭಾವ ಪರವಶರಾಗುವ ಮನಸಿದ್ದರೆ ಆಯಿತು. ಕವಿ ಗುಲ್ಚಾರ ಕವನಗಳು ಮೈ..ಮನ ಆವರಿಸಿಕೊಳ್ಳುತ್ತವೆ. ಹೊಸ ಉತ್ಸಾಹ...ಹೊಸ ಹುಮ್ಮಸ್ಸು ಮೂಡುತ್ತದೆ...ಅದಕ್ಕೇ ಗುಲ್ಜಾರ್ ಹೇಳಿರಬೇಕು... ನೋವು....ಬಹಳ ದಿನದ್ದಲ್ಲ ಅಂತ...ಹೌದು..! ಕವಿತೆಯೊಂದರ ಸಾಲುಗಳಲ್ಲಿ ಗುಲ್ಚಾರ ಈ ಮಾತು ಹೇಳಿದ್ದಾರೆ. ಅದರ ತಾತ್ಪರ್ಯ ಈ ಥರ ಇದೆ...
ನೋವು ಕೆಲವೇ ಕ್ಷಣದ್ದು..
ಅದಕ್ಕೆ ಅಷ್ಟೊಂದು ಶಕ್ತಿಯಿಲ್ಲವೇ ಇಲ್ಲ...
ಬಂದು ಹೋಗುತ್ತದೆ..ಬಂದು ಕಾಡುತ್ತದೆ
ಅಷ್ಟೆ. ಚಿಂತಿಸಬೇಕಿಲ್ಲ ಅಂತಾರೆ...
ಈ ಥರ ಗುಲ್ಚಾರ್ ಕವಿತೆಗಳಿಂದ ಕಾಡುತ್ತಾರೆ. ವಿಶಿಷ್ಟ ಕಂಚಿನ ಕಂಠದಿಂದ ಆಕರ್ಷಿಸುತ್ತಾರೆ. ಅದೆಷ್ಟೋ ಜನಕ್ಕೆ ಈ ಗುಲ್ಚಾರ್ ಚಿರಪರಚಿತ. ನನಗೆ ಈಗಷ್ಟೆ ಮನದಲ್ಲಿ ಇಳಿದಿದ್ದಾರೆ...
-ರೇವನ್
Subscribe to:
Posts (Atom)