Tuesday, February 1, 2011

ಅವಳು ಬಂದಾಗ ಉಸಿರು ಹಾರಿತು...

ಹೃದಯದಲ್ಲಿ ಅವಳು ಬಂದು ಸೇರಿದಳು.
ಅದಕ್ಕೆ ಆಗ ನನ್ನ ಉಸಿರು
ಹಾರಿ ಹೋಯಿತು...

ಹೃದಯ..ಹೃದಯ ಸೇರಿಕೊಂಡವು
ಅನ್ಕೊಂಡೆ. ನಂತ್ರ ಗೊತ್ತಾಯಿತು.
ಸೇರಿದ್ದು ಅವಳಲ್ಲ ಅವಳ ಉಸಿರು ಅಂತ.
ಆ ಕ್ಷಣವೇ ನನ್ನ ಉಸಿರೇ ಹಾರಿ ಹೋಗಿತ್ತು...

ಪ್ರೀತಿಸಿ
..ಪ್ರೀತಿಸಿ ಅವಳನ್ನ ಎದೆಯಲ್ಲಿ
ಗಟ್ಟಿ ಮಾಡಿಕೊಂಡಿದ್ದೆ. ಅವಳ ಆಗಮನ
ದಿಂದ ಉಸಿರಿಗೆ ಜಾಗವೇ ಇರಲಿಲ್ಲ.
ಅವಳು ಬಂದಳು. ನಾನು ಹೊರಟು ಹೋದೆ..

ಹೃದಯಲ್ಲಿ ಒಬ್ಬಳಿಗೆ ಜಾಗ ಅನ್ಕೊಂಡಿದ್ದೆ.
ಉಸಿರಿರೋದು ಮರತೆ ಹೋಗಿತ್ತು. ಆದ್ರೂ,
ಅವಳ ನೆನಪಲ್ಲಿಯೇ ಹೋಗಿದ್ದು ಖುಷಿಯಿದೆ..

-ರೇವನ್

1 comment:

Time pass adda.. said...

ಪ್ರೀತಿಯ ಬಗ್ಗೆ ಒಂದೊಳ್ಳೆ ನವಿರಾದ ಕಲ್ಪನೆ ಇದೆ.
ಮಾತ್ರವಲ್ಲ, ಪ್ರೆಮಿಯೋಬ್ಬನು ಪ್ರೀತಿಯ ಉತ್ಕಟತೆಯಿಂದ
ಸತ್ತಿದ್ದರೂ ಅದರಲ್ಲೇ ಖುಷಿ ಇದೆ ಎನ್ನುವಾಗ ಆತನ ಪ್ರೀತಿ
ಎಷ್ಟು ಪರಿಶುದ್ದವಾದದ್ದು ಮತ್ತು ಮಹತ್ವವಾದದ್ದೆಂದು ತಿಳಿಯುತ್ತದೆ. ಭುವನೇಶ್ವರಿ ನಿಮ್ಮಿಂದ ಇನ್ನಷ್ಟು ಕನ್ನಡ ಸಾಹಿತ್ಯ ಬರೆಯಿಸಲಿ.

ಕನ್ನಡ ಸಾಹಿತ್ಯ ಪ್ರೇಮಿ
ಶ್ರೀಕಾಂತ್ ದೇವ್